ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಚಿತ್ರದುರ್ಗ ಜಿಲ್ಲೆ ,ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ. (ರಿ) ಚಿತ್ರದುರ್ಗ ಜಿಲ್ಲೆ , ವಿಶ್ವ ಮಾನವ  ಸಾಂಸ್ಕ್ರತಿಕ ಮತ್ತು ವಿದ್ಶಾ ಸಂಸ್ಥೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸೀಬಾರ- ಗುತ್ತಿನಾಡು  ಇದರ ಆಶ್ರಯದಲ್ಲಿ  ವಿಶ್ವ ಮಾದಕ ವಿರೋಧಿ ದಿನಾಚರಣೆ ಹಾಗೂ  ಕಾಲೇಜು ವಿದ್ಶಾರ್ಥಿಗಳಿಗೆ ಮಾದಕ ವಸ್ತುಗಳಿಗೆ ಬಲಿಯಾಗದಂತೆ…

ಪೋಷಕರ ತರಬೇತಿ ಕಾರ್ಯಾಗಾರ

ಪೋಷಕರ ತರಬೇತಿ ಕಾರ್ಯಾಗಾರ

ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರವು ರುಡ್ಸೆಟ್ ನೆಲಮಂಗಲದಲ್ಲಿ ನಡೆಯಿತು  13  ಜನ ನವಜೀವನ ಸಮಿತಿ ಪೋಷಕರನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತವಾದ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರಾಮಸ್ವಾಮಿಯವರು ನೆರವೇರಿಸಿದರು. ಸದಸ್ಯರಾದ ಶ್ರೀಮತಿ ವಿನಾ ರಮೇಶ್ ಅವರು…

ವ್ಯಸನಮುಕ್ತಿಯಾದವರು ಮಗದೊಮ್ಮೆ ಅಮಲಿಗೆ ಬಲಿಯಾಗದಿರುವುದು ಬಹಳ ಮುಖ್ಯ- ಡಾ|ಡಿ. ವೀರೇಂದ್ರ ಹೆಗ್ಗಡೆಯವರು

ವ್ಯಸನಮುಕ್ತಿಯಾದವರು ಮಗದೊಮ್ಮೆ ಅಮಲಿಗೆ ಬಲಿಯಾಗದಿರುವುದು ಬಹಳ ಮುಖ್ಯ- ಡಾ|ಡಿ. ವೀರೇಂದ್ರ ಹೆಗ್ಗಡೆಯವರು

ಉಜಿರೆ. ಜೂನ್ 21 : ನಮ್ಮ ಪೂರ್ವಜರು ಊರು ಕೇರಿಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ‘ನಾಳೆ ಬಾ’ ಎಂಬ ಫಲಕವನ್ನು ಹಾಕಿ ಯಾವುದೇ ಮಾರಿ ಊರಿಗೆ ಪ್ರವೇಶವಾಗದಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಮದ್ಯವರ್ಜನ ಶಿಬಿರಕ್ಕೆ ಬಂದ ಪಾನಮುಕ್ತರು ದುಶ್ಚಟವೆಂಬ ಈ ಮಹಾಮಾರಿಯನ್ನು ಹೋಗಲಾಡಿಸಲು ಹಾಗೂ ಮುಕ್ತಿ ಪಡೆಯಲು ‘ಬರಲೇ ಬೇಡ’ ಎಂಬ ಸಂಕಲ್ಪ ಮಾಡಬೇಕೆಂದು ಶ್ರೀ…

ಒಂದು ದೋಷದಿಂದ ಸಾವಿರ ಒಳ್ಳೆ ಗುಣಗಳ ನಾಶವಾಗುತ್ತದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಒಂದು ದೋಷದಿಂದ ಸಾವಿರ ಒಳ್ಳೆ ಗುಣಗಳ ನಾಶವಾಗುತ್ತದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಧರ್ಮಸ್ಥಳ, ಮಾ. 25 : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಮುಖ ಕಾರ್ಯಕ್ರಮಗಳಳ್ಳೊಂದಾದ ಮದ್ಯವರ್ಜನ ಶಿಬಿರಗಳನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗುತ್ತದೆ. ವಿಶೇಷವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತಿಂಗಳಿಗೆರಡರಂತೆ ವಿಶೇಷ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದರ 132ನೇ ಶಿಬಿರವನ್ನು 8 ದಿನಗಳ ಕಾಲ ಯಶಸ್ವಿಯಾಗಿ ನಡೆಸಿ ರಾಜ್ಯದ…

ಜನಜಾಗೃತಿ ಕಾರ್ಯಕ್ರಮ ಮಾನವ ಸಂಬಂಧಿತವಾಗಿದೆ  – ಡಾ| ಎಲ್.ಹೆಚ್. ಮಂಜುನಾಥ್

ಜನಜಾಗೃತಿ ಕಾರ್ಯಕ್ರಮ ಮಾನವ ಸಂಬಂಧಿತವಾಗಿದೆ – ಡಾ| ಎಲ್.ಹೆಚ್. ಮಂಜುನಾಥ್

ಧರ್ಮಸ್ಥಳ, ಮಾ:12: “ಜೀವನದ ಯಶಸ್ವಿಗೆ ಮನುಷ್ಯ ಸಾಧನಾ ಪ್ರೇರಣೆ, ಅಧಿಕಾರ ಪ್ರೇರಣೆ, ಸೇವಾ ಪ್ರೇರಣೆ, ವಿಸ್ತರಣಾ ಪ್ರೇರಣೆ ಎಂಬ ನಾಲ್ಕು ವಿಧದ ಮನಸ್ಥಿತಿಯನ್ನು ಅಳವಡಿಸಿಕೊಂಡು ಗುರಿ ತಲುಪಲು ಪ್ರಯತ್ನಿಸುತ್ತಾನೆ. ಸಾಧನಾ ಪ್ರೇರಣೆಗೆ ಧೀರೂಬಾೈ ಅಂಬಾನಿಯವರು ಉದಾಹರಣೆಯಾದರೆ, ಅಧಿಕಾರ ಪ್ರೇರಣೆಗೆ ರಾಜಕೀಯ ನೇತಾರರು, ಸೇವಾಪ್ರೇರಣೆಗೆ ಬಾಬಾ ಅಮ್ಟೆ, ಮದರ್ ತೆರೇಸಾ ರವರು ಸಾಕ್ಷಿಯಾದರೆ, ವಿಸ್ತರಣಾ ಪ್ರೇರಣೆಗೆ ಗುರಿಯಾಗುವ…

ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಉಜಿರೆ, ಫೆ.28 : “ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು, ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ. ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ, ಕೆಟ್ಟ ಕ್ಷಣಗಳಿಂದ ಮತಿಭ್ರಮಣೆಯಾಗಿ ದಿಕ್ಕು ದೆಸೆಯಿಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕಾಗಿಯಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತದೆಯೇ ವಿನಹ ಪ್ರಮಾಣಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ.…

ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ಧರ್ಮಸ್ಥಳ: “ದುಶ್ಚಟದ ಜೀವನ ದೌರ್ಬಲ್ಯ ಮತ್ತು ದೋಷದ ಬದುಕಾಗಿದೆ. ಇದರಿಂದ ಮದ್ಯವರ್ಜನ ಶಿಬಿರದ ಮೂಲಕ ಅಂತರಂಗ ಶುದ್ಧಿ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ಅವಕಾಶ ಪಡೆದ ನೀವು ಯೋಗ್ಯರು ಆಗಿದ್ದೀರಿ. ಸತತ ಪ್ರಯತ್ನ, ಹಟ ಸಾಧನೆ ಮಾಡಿ 100 ದಿನ ಪಾನಮುಕ್ತ ಜೀವನವನ್ನು ಅನುಭವಿಸಿ ಸಂಸಾರದ ಜೊತೆಯಲ್ಲಿ ಸುಖಾನುಭವ…