ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಚಿತ್ರದುರ್ಗ ಜಿಲ್ಲೆ ,ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ. (ರಿ) ಚಿತ್ರದುರ್ಗ ಜಿಲ್ಲೆ , ವಿಶ್ವ ಮಾನವ ಸಾಂಸ್ಕ್ರತಿಕ ಮತ್ತು ವಿದ್ಶಾ ಸಂಸ್ಥೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸೀಬಾರ- ಗುತ್ತಿನಾಡು ಇದರ ಆಶ್ರಯದಲ್ಲಿ ವಿಶ್ವ ಮಾದಕ ವಿರೋಧಿ ದಿನಾಚರಣೆ ಹಾಗೂ ಕಾಲೇಜು ವಿದ್ಶಾರ್ಥಿಗಳಿಗೆ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಅರಿವು ಮೂಡಿಸಲು ಜಿಲ್ಲಾ ಮಟ್ಟದ 100 ಸ್ಟಾಸ್ಥ್ಶ ಸಂಕಲ್ಪ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪೋಲಿಸ್ ಇಲಾಖೆ ಚಿತ್ರದುರ್ಗ ASP ಶ್ರೀ M.B .ನಂದಗಾಂವಿಯವರು ನೆರವೇರಿಸಿದರು. ಅಧ್ಶಕ್ಷತೆಯನ್ನು ಜನಜಾಗ್ರತಿ ವೇದಿಕೆ ಪದಾಧಿಕಾರಿಯವರು ಹಾಗೂ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಶಕ್ಷರಾದ ಶ್ರೀ K.R.ಮಂಜುನಾಥ್ ರವರು ವಹಿಸಿದ್ದರು. ಕರಪತ್ರ ಬಿಡುಗಡೆಯನ್ನು ವಿಶ್ವ ಮಾನವ ವಿದ್ಶಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ನೀಲಕಂಠ ದೇವರು ಮಾಡಿದರು.ಮುಖ್ಶ ಅತಿಥಿಗಳಾಗಿ ಶ್ರೀಮತಿ ರೂಪಾ ಜನಾರ್ಧನ್ ˌ ಡಾ.ಹೆಚ್ .ಕೆ.ಎಸ್.ಸ್ವಾಮಿ. ಭಾಗವಹಿಸಿದ್ದರು. ಸಂಪನ್ಮೂಲ ವ್ಶಕ್ತಿಯಾಗಿ ಶ್ರೀ ನಾಗರಾಜ್ ಸಂಗಮ್ ರವರು ಮಾಹಿತಿ ನೀಡಿದರು.
ಶ್ರೀ ಉಮೇಶ್ ˌಯೋಜನಾಧಿಕಾರಿಯವರು ˌ ಕು. ವಿದ್ಶಾ ಜ್ಞಾನ ವಿಕಾಸ ಸಮನ್ವಯಾಧಿಕಾರಿಯರುˌ ಶ್ರೀ ಶಶಿಧರ್ ಮೇಲ್ವಿಚಾರಕರುˌ ಸೇವಾಪ್ರತಿನಿಧಿಯವರು ˌ ಕಾಲೇಜು ಉಪನ್ಶಾಸಕರು ಕಾರ್ಯಕ್ರಮ ಸಂಯೋಜನೆ ಮಾಡಿದರು.