ವ್ಯಸನಮುಕ್ತ ಭಾರತ- ಸ್ವಸ್ಥ ಯುವ ಜನಾಂಗ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣದ ಅಂಗವಾಗಿ ಮದ್ಯವರ್ಜನ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತಿದೆ. ಕಳೆದ 2 ದಶಕಗಳಿಂದ 1328 ಸಮುದಾಯ ಮತ್ತು ವಿಶೇಷ ಮದ್ಯವರ್ಜನ ಚಿಕಿತ್ಸಾ ಶಿಬಿರಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದು, 1,01,958 ವ್ಯಸನಿಗಳು ಭಾಗವಹಿಸಿ ದುಶ್ಚಟಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.   
ಗೌಪ್ಯವಾಗಿ ಪಾನಮುಕ್ತರಾಗಲು ಬಯಸುವವರಿಗೆ ಬೆಳ್ತಂಗಡಿ ತಾಲೂಕಿನ ಲಾೈಲ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಹಳೆ ಆಸ್ಪತ್ರೆಯ ವಠಾರದಲ್ಲಿರುವ ‘ಜಾಗೃತಿ ಸೌಧ’ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುವ ಮದ್ಯವರ್ಜನ ಸಲಹಾ ಶಿಬಿರಗಳಲ್ಲಿ ಪ್ರತ್ಯೇಕ ವಿಶೇಷ ಶಿಬಿರಗಳ ವ್ಯವಸ್ಥೆಯಿದೆ. 

ಈ ಶಿಬಿರಕ್ಕೆ ಹೆಸರು ನೊಂದಾಯಿಸಲು ಸಂಪರ್ಕಿಸಬೇಕಾದ ವಿಳಾಸ ಈ ಕೆಳಗಿನಂತಿದೆ.  ನಿರ್ದೇಶಕರು/ಯೋಜನಾಧಿಕಾರಿಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕೇಂದ್ರ ಕಛೇರಿ ಬೆಳ್ತಂಗಡಿ, ಶ್ರೀ ಕ್ಷೇತ್ರ ಕಾಂಪ್ಲೆಕ್ಸ್, ಪ್ರಧಾನ ಅಂಚೆ ಕಛೇರಿ ಬಳಿ ಬೆಳ್ತಂಗಡಿ, ದ.ಕ. ಜಿಲ್ಲೆದೂ.: 08256-232133(ಬೆಳಿಗ್ಗೆ 09.00 ರಿಂದ ಸಂಜೆ 5.30ರವರೆಗೆ), 9901321186, 9449365931, 9449903757, 9448468332, 9611581332. 
ವಿಶೇಷ ಶಿಬಿರದ ದಿನಾಂಕಗಳು ಈ ಕೆಳಗಿನಂತಿವೆ.
1. 18.03.2019 ರಿಂದ 25.03.2019 ರವರೆಗೆ. 

ಶಿಬಿರದ ಸ್ಥಳಕ್ಕೆ ಮಾರ್ಗಸೂಚಿ :

 

ಸ್ವಸ್ಥ ಯುವ ಜನಾಂಗ ಮದ್ಯಪಾನದಿಂದ ಮುಕ್ತರಾಗಬೇಕೇ…?

Leave a Reply

Your email address will not be published. Required fields are marked *