ಉಜಿರೆ. ಜೂನ್ 21 : ನಮ್ಮ ಪೂರ್ವಜರು ಊರು ಕೇರಿಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ‘ನಾಳೆ ಬಾ’ ಎಂಬ ಫಲಕವನ್ನು ಹಾಕಿ ಯಾವುದೇ ಮಾರಿ ಊರಿಗೆ ಪ್ರವೇಶವಾಗದಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಮದ್ಯವರ್ಜನ ಶಿಬಿರಕ್ಕೆ ಬಂದ ಪಾನಮುಕ್ತರು ದುಶ್ಚಟವೆಂಬ ಈ ಮಹಾಮಾರಿಯನ್ನು ಹೋಗಲಾಡಿಸಲು ಹಾಗೂ ಮುಕ್ತಿ ಪಡೆಯಲು ‘ಬರಲೇ ಬೇಡ’ ಎಂಬ ಸಂಕಲ್ಪ ಮಾಡಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು 138ನೇ ವಿಶೇಷ ಮದ್ಯವರ್ಜನ ಶಿಬಿರದ 6ನೇ ದಿನದಂದು ಆಗಮಿಸಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ 82 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಉಜಿರೆ. ಜೂನ್ 21 : ನಮ್ಮ ಪೂರ್ವಜರು ಊರು ಕೇರಿಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ‘ನಾಳೆ ಬಾ’ ಎಂಬ ಫಲಕವನ್ನು ಹಾಕಿ ಯಾವುದೇ ಮಾರಿ ಊರಿಗೆ ಪ್ರವೇಶವಾಗದಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಮದ್ಯವರ್ಜನ ಶಿಬಿರಕ್ಕೆ ಬಂದ ಪಾನಮುಕ್ತರು ದುಶ್ಚಟವೆಂಬ ಈ ಮಹಾಮಾರಿಯನ್ನು ಹೋಗಲಾಡಿಸಲು ಹಾಗೂ ಮುಕ್ತಿ ಪಡೆಯಲು ‘ಬರಲೇ ಬೇಡ’ ಎಂಬ ಸಂಕಲ್ಪ ಮಾಡಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು 138ನೇ ವಿಶೇಷ ಮದ್ಯವರ್ಜನ ಶಿಬಿರದ 6ನೇ ದಿನದಂದು ಆಗಮಿಸಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ 82 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  ಪರಿವರ್ತನೆ ಬದುಕಿನ ಒಂದು ಭಾಗವಾಗಿದೆ. ಮನುಷ್ಯ ಶಾರೀರಿಕವಾಗಿ, ಮಾನಸಿಕವಾಗಿ, ಔದ್ಯೋಗಿಕವಾಗಿ, ಸಾಂಸಾರಿಕವಾಗಿ ಬದಲಾವಣೆಯನ್ನು ಕಾಣಬೇಕೆಂಬ ಹುಮ್ಮಸ್ಸಿನಿಂದ ದುಡಿಯುತ್ತಾನೆ. ಮದ್ಯಪಾನ ಸೇವಿಸುವವರು ಮೂಲತ: ಉತ್ತಮ ಸ್ವಭಾವದವರು. ಅವರು ಸ್ವತ: ಕುಡಿಯುತ್ತಿದ್ದರೂ, ತಮ್ಮ ಮಕ್ಕಳು ಕುಡಿಯದಂತೆ ಎಚ್ಚರ ವಹಿಸುತ್ತಾರೆ. ಆದರೆ ಸ್ವತ: ಅವರಿಂದ ಬಿಡಲು ಸಾಧ್ಯವಾಗುವುದಿಲ್ಲ. ಕಾರಣ ಮದ್ಯಪಾನವೇ ಅವರನ್ನು ಗಟ್ಟಿಯಾಗಿ ಮರಕ್ಕೆ ಬಳ್ಳಿ ಆವರಿಸಿದಂತೆ ಬಿಗಿಯಾಗಿ ಹಿಡಿದುಕೊಂಡಿರುತ್ತದೆ. ಕೆಲವರು ನಾಲ್ಕಾರು ವರ್ಷ ವ್ಯಸನಮುಕ್ತಿಯಾದವರು ಮಗದೊಮ್ಮೆ ಕುಡಿತಕ್ಕೆ ಬಲಿ ಬೀಳುವುದು ಈ ಕಾಯಿಲೆಯ ವಿಕೃತ ಸ್ವರೂಪವಾಗಿದೆ. ಮನುಷ್ಯ ಚಟಕ್ಕೆ ಒಳಗಾದಾಗ ಕ್ರೂರಿಯಾಗಿ ಜಗಳ, ಹಿಂಸೆ, ಅನಾಹುತ, ಅಪಘಾತ, ಆತ್ಮಹತ್ಯೆಯವರೆಗೂ ಸಾಗುತ್ತಾನೆ. ಸಮಾಜದ ಬಹುಪಾಲು ಅಚಾತುರ್ಯಗಳಿಗೆ ಮದ್ಯಪಾನ ಕಾರಣವಾಗುತ್ತದೆ. ಈ ಕಾರಣದಿಂದಾಗಿ ಮನೆಯವರು ಆತಂಕಕ್ಕೊಳಗಾಗಿ ನಮ್ಮ ಶಿಬಿರಗಳಿಗೆ ಆಗಮಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಈ ರೀತಿ ಪರಿವರ್ತನೆಯಾದವರು ಮತ್ತೆ ಅದನ್ನು ಮರುಪ್ರಯೋಗ ಮಾಡಬಾರದೆಂದು ಆಶೀರ್ವದಿಸಿದರು.   ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಬೆಂಗಳೂರಿನ ಶ್ರೀ ವಿಜೇತ್ ಮಾತನಾಡಿ, “ಮನಸಂತೋಷಕ್ಕಾಗಿ ದು:ಖ ಮರೆಯಲು ಕುಡಿತ ಆರಂಭಿಸಿದ ನಾನು ಇದೀಗ ಜಿಗುಪ್ಸೆಯಲ್ಲಿದ್ದೇನೆ. ಆದರೆ ಶಿಬಿರದಲ್ಲಿ ಆ ಜಿಗುಪ್ಸೆ ಮಾಯವಾಗಿ ಆತ್ಮ ವಿಶ್ವಾಸ ಗಟ್ಟಿಯಾಗಿದೆ, ಇನ್ನು ಮುಂದೆ ನನ್ನ ಬದುಕನ್ನು ಸ್ವರ್ಗ ಮಾಡಬೇಕೆಂಬ ಹುಮ್ಮಸ್ಸಿನಲ್ಲಿದ್ದೇನೆ”. ಸುಬ್ರಹ್ಮಣ್ಯದ ಶ್ರೀ ಯಶೋಧರರವರು ಅನಿಸಿಕೆ ವ್ಯಕ್ತಪಡಿಸಿ “20 ವರ್ಷದ ಹಿಂದೆ ದಿನಕ್ಕೆ 20 ರೂಪಾಯಿ ದುಡಿಯುತ್ತಿದ್ದಾಗ ನನ್ನ ಕುಟುಂಬದಲ್ಲಿ ಸಂತೋಷವಿತ್ತು. ಇದೀಗ ಇಪ್ಪತ್ತಮೂರು ಸಾವಿರ ಸಂಬಳಕ್ಕೆ ದುಡಿಯುತ್ತಿದ್ದರೂ ಈ ಚಟದಿಂದಾಗಿ ನನಗೆ ಸುಖವಿಲ್ಲ ಎಂದು ಪಶ್ಚಾತ್ತಾಪ ಪಡುತ್ತಿದ್ದೇನೆ. ಈ ಶಿಬಿರದಲ್ಲಿ ನನಗೆ ಪರಿವರ್ತನೆಯಾಗಲು ಮಾರ್ಗದರ್ಶನ ಸಿಕ್ಕಿದೆ.” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಮಾಜಿ ತಾಲೂಕು ಅಧ್ಯಕ್ಷರಾದ ಶ್ರೀ ಪ್ರತಾಪಸಿಂಹ ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ರಾಜೇಂದ್ರದಾಸ್, ಶ್ರೀ ಧನಕೀರ್ತಿ ಜೈನ್‍ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೆಗ್ಗಡೆಯವರು ಶಿಬಿರಾರ್ಥಿಗಳೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಈ ಶಿಬಿರದ ಶಿಬಿರಾರ್ಥಿಗಳ ಮನಪರಿವರ್ತನೆಯಲ್ಲಿ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಶ್ರೀ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿ ಶ್ರೀ ನಾಗರಾಜ್, ಆರೋಗ್ಯ ಸಹಾಯಕರಾದ ಶ್ರೀಮತಿ ಜಯಲಕ್ಷ್ಮೀ, ಶ್ರೀ ವೆಂಕಟೇಶ್ ರವರು ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:01.07.2019 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

ಶ್ರೀ ವಿವೇಕ್ ವಿ. ಪಾೈಸ್ 
ನಿರ್ದೇಶಕರು/ಕಾರ್ಯದರ್ಶಿ

ವ್ಯಸನಮುಕ್ತಿಯಾದವರು ಮಗದೊಮ್ಮೆ ಅಮಲಿಗೆ ಬಲಿಯಾಗದಿರುವುದು ಬಹಳ ಮುಖ್ಯ- ಡಾ|ಡಿ. ವೀರೇಂದ್ರ ಹೆಗ್ಗಡೆಯವರು
Tagged on:                                 

Leave a Reply

Your email address will not be published. Required fields are marked *