ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದ ಪೋಷಕರ ತರಬೇತಿ ಕಾರ್ಯಕ್ರಮವು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾದಲ್ಲಿ ದಿನಾಂಕ 14.3.2019 ಗುರುವಾರ ನಡೆಯಿತು. 
ತಾಲ್ಲೂಕಿನ ನವಜೀವನ ಸಮಿತಿಯ ಸದಸ್ಯರ ಪುನಶ್ಚೇತನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.
ತರಬೇತಿ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್ ಅವರು ನಡೆಸಿ ಕೊಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಶಂಕರ್ ಶೆಟ್ಟಿ, ಯೋಜನಾಧಿಕಾರಿಗಳಾದ ನಾಗರಾಜ್ ಎಂ ನಾಯ್ಕ, ಶಿಬಿರಾಧಿಕಾರಿ ದಿನೇಶ್ ಮರಾಠಿ, ವೇದಿಕೆ ಸದಸ್ಯರಾದ ಮಮತಾ ನಾಯ್ಕ, ವಾಸುದೇವ ನಾರಾಯಣ ನಾಯ್ಕ, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ತಾಂತ್ರಿಕ ತರಬೇತುದಾರರು ಮತ್ತು ಮೂವತ್ತು ಮಂದಿ ಪಾನಮುಕ್ತ ಸದಸ್ಯರು ಭಾಗವಹಿಸಿದ್ದರು.

“ಪೋಷಕರ ತರಬೇತಿ ಕಾರ್ಯಾಗಾರ”

Leave a Reply

Your email address will not be published. Required fields are marked *